ಒಂದು ನಿಸ್ತೇಜ ಮಬ್ಬು
ಮುಂಜಾವಿನ ಹನಿಮಳೆಯಲ್ಲಿ
ಬೆಳಗಿನ ದೂತರ ಕಲಾಪವನ್ನು
ಲೆಕ್ಕಿಸದೇ ಎತ್ತರದಲ್ಲಿ
ಸತ್ತ ಮರವೊಂದರ ಒಡಕು
ಮೂಳೆಯ ಮೇಲೆ
ಜಜ್ಜಿಹೋದಂತಿರುವ, ನಿಬಿಡ ಗರಿಗಳ
ರಾಶಿಯೊಳಗಿಂದ ಮೇಲೆದ್ದ,
ಕಾಂಡವೊಂದರ ಮೇಲಿಟ್ಟ ಉರುಟುಕಲ್ಲಿನ ಹಾಗಿನ
ತನ್ನ ನುಣುಪು ತಲೆಯನ್ನು
ಬಳಿಯಲ್ಲಿದ್ದ ಸಂಗಾತಿಗೆ ಆನಿಸಿ
ಕೂತ ರಣಹದ್ದು.
ನಿನ್ನೆಯಷ್ಟೇ ಕಂದಕದ ಜವುಗಿನಲ್ಲಿ
ನೀರು ತುಂಬಿ ಉಬ್ಬಿದ ಹೆಣವೊಂದರ
ಕಣ್ಣುಗಳನ್ನು ಕುಕ್ಕಿ ಅದರ ಕರುಳನ್ನು ಬಗೆದು
ಹೊಟ್ಟೆ ಬಿರಿಯುವಷ್ಟು ಕಬಳಿಸಿ
ವಿರಮಿಸಿದ್ದವು. ಉಳಿದ
ಖಾಲಿ ಹಂದರವು ತಮ್ಮ ತಣ್ಣನೆಯ ದೂರದರ್ಶಿ
ನದರಿನೊಳಗೆ ಇರುವಂತ ತಾವಿನಲ್ಲಿ...
ಮುಂಜಾವಿನ ಹನಿಮಳೆಯಲ್ಲಿ
ಬೆಳಗಿನ ದೂತರ ಕಲಾಪವನ್ನು
ಲೆಕ್ಕಿಸದೇ ಎತ್ತರದಲ್ಲಿ
ಸತ್ತ ಮರವೊಂದರ ಒಡಕು
ಮೂಳೆಯ ಮೇಲೆ
ಜಜ್ಜಿಹೋದಂತಿರುವ, ನಿಬಿಡ ಗರಿಗಳ
ರಾಶಿಯೊಳಗಿಂದ ಮೇಲೆದ್ದ,
ಕಾಂಡವೊಂದರ ಮೇಲಿಟ್ಟ ಉರುಟುಕಲ್ಲಿನ ಹಾಗಿನ
ತನ್ನ ನುಣುಪು ತಲೆಯನ್ನು
ಬಳಿಯಲ್ಲಿದ್ದ ಸಂಗಾತಿಗೆ ಆನಿಸಿ
ಕೂತ ರಣಹದ್ದು.
ನಿನ್ನೆಯಷ್ಟೇ ಕಂದಕದ ಜವುಗಿನಲ್ಲಿ
ನೀರು ತುಂಬಿ ಉಬ್ಬಿದ ಹೆಣವೊಂದರ
ಕಣ್ಣುಗಳನ್ನು ಕುಕ್ಕಿ ಅದರ ಕರುಳನ್ನು ಬಗೆದು
ಹೊಟ್ಟೆ ಬಿರಿಯುವಷ್ಟು ಕಬಳಿಸಿ
ವಿರಮಿಸಿದ್ದವು. ಉಳಿದ
ಖಾಲಿ ಹಂದರವು ತಮ್ಮ ತಣ್ಣನೆಯ ದೂರದರ್ಶಿ
ನದರಿನೊಳಗೆ ಇರುವಂತ ತಾವಿನಲ್ಲಿ...
ವಿಚಿತ್ರವೆನಿಸುತ್ತದೆ. ಈ
ಪ್ರೀತಿಯೆಂಬುದಕ್ಕೆ ಖಯಾಲಿ ಜಾಸ್ತಿ.
ಅಂತದ್ದರಲ್ಲಿ ಹೇಗೆ
ಆ ರುದ್ರ ಮಸಣದೊಳಗೆ ನುಸುಳಿ
ಮೂಲೆಯೊಂದನ್ನು ಹಿಡಿದು
ಒಪ್ಪ ಮಾಡಿಕೊಂಡು ಮುರುಟಿಕೊಳ್ಳುತ್ತದೆ. ಬಹುಶಃ
ಅಲ್ಲಿಯೇ ನಿದ್ರಿಸಿಬಿಡುತ್ತದೆ ಮುಖವನ್ನು ಗೋಡೆಯತ್ತ ತಿರುಗಿಸಿ!
....ಹೀಗೆ ಬೆಲ್ಸನ್ ಕ್ಯಾಂಪಿನ ಕಮಾಂಡಂಟ್
ದಿನದ ಕೆಲಸ ಮುಗಿಸಿ ಮನೆಗೆ ಹೊರಟವನು
ಹಾದಿಬದಿಯ ಮಿಠಾಯಿ ಅಂಗಡಿ ಹೊಕ್ಕು
ಮನೆಯಲ್ಲಿ ಅಪ್ಪನ ಬರವನ್ನೇ ನೋಡುತ್ತಿರುವ
ಎಳೆಯ ಕಂದಮ್ಮನ ಸಲುವಾಗಿ
ಚಾಕಲೇಟ್ ಖರೀದಿಸುತ್ತಾನೆ.
ಅವನ ರೋಮಭರಿತ ಮೂಗಿಗೆ ಪಟ್ಟು ಹಿಡಿದವರಂತೆ
ಅಂಟಿಕೊಂಡ ಹೊಗೆ...ಸುಟ್ಟ
ಮನುಷ್ಯರ ಹೊಗೆ...
ಪ್ರೀತಿಯೆಂಬುದಕ್ಕೆ ಖಯಾಲಿ ಜಾಸ್ತಿ.
ಅಂತದ್ದರಲ್ಲಿ ಹೇಗೆ
ಆ ರುದ್ರ ಮಸಣದೊಳಗೆ ನುಸುಳಿ
ಮೂಲೆಯೊಂದನ್ನು ಹಿಡಿದು
ಒಪ್ಪ ಮಾಡಿಕೊಂಡು ಮುರುಟಿಕೊಳ್ಳುತ್ತದೆ. ಬಹುಶಃ
ಅಲ್ಲಿಯೇ ನಿದ್ರಿಸಿಬಿಡುತ್ತದೆ ಮುಖವನ್ನು ಗೋಡೆಯತ್ತ ತಿರುಗಿಸಿ!
....ಹೀಗೆ ಬೆಲ್ಸನ್ ಕ್ಯಾಂಪಿನ ಕಮಾಂಡಂಟ್
ದಿನದ ಕೆಲಸ ಮುಗಿಸಿ ಮನೆಗೆ ಹೊರಟವನು
ಹಾದಿಬದಿಯ ಮಿಠಾಯಿ ಅಂಗಡಿ ಹೊಕ್ಕು
ಮನೆಯಲ್ಲಿ ಅಪ್ಪನ ಬರವನ್ನೇ ನೋಡುತ್ತಿರುವ
ಎಳೆಯ ಕಂದಮ್ಮನ ಸಲುವಾಗಿ
ಚಾಕಲೇಟ್ ಖರೀದಿಸುತ್ತಾನೆ.
ಅವನ ರೋಮಭರಿತ ಮೂಗಿಗೆ ಪಟ್ಟು ಹಿಡಿದವರಂತೆ
ಅಂಟಿಕೊಂಡ ಹೊಗೆ...ಸುಟ್ಟ
ಮನುಷ್ಯರ ಹೊಗೆ...
ನೀವು ಬಯಸಿದರೆ ಕೊಂಡಾಡಿ
ವಿಧಿಯ ಔದಾರ್ಯವನ್ನು.
ರಕ್ಕಸನೊಬ್ಬನಿಗೂ
ಪುಟ್ಟ ಮಿಂಚುಳವನ್ನು,
ಕ್ರೂರ ಹೃದಯದ ಹಿಮ ಕಮರಿಯೊಳಗೂ
ತೊಟ್ಟು ಕೋಮಲತೆಯನ್ನು
ಕರುಣಿಸಿತಲ್ಲ ಅದು ಎಂಬುದಕ್ಕಾಗಿ.
ಅಥವಾ ಹತಾಶರಾಗಿ.
ನಂಟುಳ್ಳ ಪ್ರೀತಿಯ
ಮೊಳಕೆಯಲ್ಲಿಯೇ ಖೂಳತನವನ್ನೂ ಇಟ್ಟು
ಅದಕ್ಕೆ ಸಾವಿಲ್ಲದಂತೆ ಮಾಡುತ್ತದೆಯಲ್ಲ ಅದಕ್ಕಾಗಿ.
ವಿಧಿಯ ಔದಾರ್ಯವನ್ನು.
ರಕ್ಕಸನೊಬ್ಬನಿಗೂ
ಪುಟ್ಟ ಮಿಂಚುಳವನ್ನು,
ಕ್ರೂರ ಹೃದಯದ ಹಿಮ ಕಮರಿಯೊಳಗೂ
ತೊಟ್ಟು ಕೋಮಲತೆಯನ್ನು
ಕರುಣಿಸಿತಲ್ಲ ಅದು ಎಂಬುದಕ್ಕಾಗಿ.
ಅಥವಾ ಹತಾಶರಾಗಿ.
ನಂಟುಳ್ಳ ಪ್ರೀತಿಯ
ಮೊಳಕೆಯಲ್ಲಿಯೇ ಖೂಳತನವನ್ನೂ ಇಟ್ಟು
ಅದಕ್ಕೆ ಸಾವಿಲ್ಲದಂತೆ ಮಾಡುತ್ತದೆಯಲ್ಲ ಅದಕ್ಕಾಗಿ.
[ಬೆಲ್ಸನ್ ಕ್ಯಾಂಪ್- ನಾಝಿ ಕಾನ್ಸನ್‌ಟ್ರೇಶನ್ ಕ್ಯಾಂಪ್]
ಮೂಲ: ಚಿನುವಾ ಅಚಿಬೆ
ಕನ್ನಡಕ್ಕೆ: ಪ್ರಜ್ಞಾ
ಯಾತನಾಶಿಬಿರದಲ್ಲಿ ಮೂಡಿದ ಕವಿತೆಯು ಕರುಳು ಕಿವುಚುವಂತಿದೆ. ಅನುವಾದವೂ ಸಮರ್ಪಕವಾಗಿದೆ. ಅಭಿನಂದನೆಗಳು.
ReplyDeleteಯಾತನಾಶಿಬಿರ. concentration camp ಗೆ ಕನ್ನಡದ ಪದ ಸಿಗದೆ ಹಾಗೇ ಇಟ್ಟಿದ್ದೆ. ನಿಮ್ಮಿಂದಾಗಿ ನನಗೆ ಆ ಪದ ಸಿಕ್ಕಿತು, ಕಾಕಾ. ನೀವು ಬೆನ್ನು ತಟ್ಟುತ್ತೀರೆಂದೇ ಇಲ್ಲಿ ಪೋಸ್ಟ್ ಮಾಡುವುದು!ಹೇಗೆ ಋಣ ತೀರಿಸಲಿ?
Deleteನೀವು ಬರೆಯುತ್ತ ಹೋಗುವುದು, ಆ ಬರಹಗಳನ್ನು ಓದಿ ನಾನು ಸಂತೋಷಪಡುವುದು, ಇದೇ ನೀವು ಋಣ ತೀರಿಸಬಹುದಾದ ಬಗೆ!
Delete