ಗಾಳಿಯಲ್ಲಿ ಅರಸುತ್ತೇನೆ ಮಾಯದಂಥ
ನಿನ್ನ ದನಿಯ ಚೆಹರೆಗಾಗಿ
ಒಮ್ಮೆ ಸ್ವರದ ಬೆರಳೊಳಗೆ ಬೆರಳಿಟ್ಟು
ಮತ್ತೊಮ್ಮೆ ನಾದದಲೆಗಳಿಗಾತು
ಅರಸುತ್ತೇನೆ ಹುಡುಗೀ ಕರೆವ ಕೊರಳಿನ ಚೆಹರೆಗಾಗಿ
ಯಾವುದೋ ಒಂದು ದಿನ ಸಿಕ್ಕಾಗ
ಕಾಡಿಗೆಯ ಬೊಟ್ಟೊಂದನ್ನ ಇಡಬೇಕು
ನಿನ್ನ ಆವಾಜಿನ ಕೆನ್ನೆಯ ಮೇಲೆ
ನನ್ನ ಕಣ್ಣೇ ತಾಕೀತೆಂಬ ಭೀತಿ ನನಗೆ!
[ಸಂವರ್ತ ಸಾಹಿಲ್ ಬರೆದ ಹಿಂದಿ ಕವಿತೆಯ ಕನ್ನಡ ರೂಪ]
No comments:
Post a Comment