ಹರಿವ ನದಿ
ಹಿಮವಾದ ಗಳಿಗೆ.
ಪುಟಿದ ಅಲೆಯೊಂದು
ಚಿತ್ರವಾಗಿದ್ದ ಪರಿ...
ಒಡಲೊಳಗೆ ಸೆರೆ ಸಿಕ್ಕ
ಕನಸುಗಳ ನರ ಬಿಗಿದು
ಚಿತ್ರವಾಗಿದ್ದ
ಪರಿ…
ಆಚೆ
ದಡದಲಿ ಕಾಯ್ದು ಕುಳಿತವಳ
ಕಣ್ಮಿಂಚು,
ತುಟಿಯಂಚು, ಕೊರಳ ಇಳಿಜಾರಿನಂಚು
ನೆನೆಯುತ್ತ
ಧಾವಿಸಿದ ನಾವೆಯೊಂದು
ಚಿತ್ರವಾದ
ಪರಿ…
ತೆವಳಿತ್ತು ಮರಿ ಮೀನೊಂದು
ತಳದೊಳಗೆ ಜೀವ ಸಂಚಾರ
No comments:
Post a Comment