ದೇವರಿಲ್ಲದ ಗುಡಿಗೊಬ್ಬ ದ್ವಾರಪಾಲಕ
ಹೊತ್ತುಕೊಂಡು ಹೋಗುವುದಕ್ಕೆ ಇನ್ನೇನು ಉಳಿದಿದೆ ಮಣ್ಣು
ಆಲಯ ಬಯಲು ಬಯಲಾಗಿದೆ
ಇದು ನಿನ್ನದೂ ಅಲ್ಲ
ನನ್ನದೂ ಅಲ್ಲ
ಕಾಗೆ ಎಂಜಲು ಮಾಡಿ ಎಸೆದ ಬೀಜ, ಅಂಕುರವೊಡೆದು
ಹಸಿವಾದಾಗ ಕಲ್ಲು ಪಡಕುಗಳಲ್ಲಿ ಬೇರಿಳಿಸಿ
ಹೆಮ್ಮರವಾಗಿ ಆಕಾಶಕ್ಕೆ ತಾಗಿದರೂ,
ಇದು ಅದರದ್ದೂ ಅಲ್ಲ
ಹಿಂದಿನವರದ್ದೂ ಅಲ್ಲ
ಮುಂದಿನವರದ್ದೂ ಅಲ್ಲ
ಆದರೂ ಬಿಡಲೊಲ್ಲ ಕಾಯುತ್ತೇನೆ ಎನ್ನುತ್ತಾನೆ ಗಾವಿಲ
-ಪ್ರಜ್ಞಾ
No comments:
Post a Comment