1. ಸ್ಥಾನ ಪಲ್ಲಟ
ಒಂದರೆಗಳಿಗೆ...
ಮಾವಿನ ತೋಪಿನ ಒಣ
ತರಗೆಲೆಗಳ ಒಳಗೆ 
ಪ್ರೇಮದಲ್ಲಿ  ಹೃದಯ ಸ್ಥಾನ ಪಲ್ಲಟಗೊಂಡಿದ್ದಕ್ಕೆ ಲೆಕ್ಕವಿಲ್ಲ
ಆಮೇಲೆ, ಬೆಟ್ಟಗಳನ್ನ
ನೋಡುತ್ತ ಅಂದುಕೊಳ್ಳುತ್ತಿದ್ದೆ
2. ನನ್ನಜ್ಜಿ 
ನನ್ನಜ್ಜಿಗೆ ತಲೆ
ಕೆಟ್ಟಿತ್ತು.
ಅವಳ ಹುಚ್ಚು ದಿನೇ ದಿನೇ ಬೆಳೆದು,
ಹಣ್ಣಾಗಿ, ಸಾವಾದಾಗ,
ನನ್ನ ಮಾವ, ಮಹಾ ಜಿಪುಣ, 
ಅವಳನ್ನ ಹುಲ್ಲೊಳಗೆ ಸುತ್ತಿ
ನಮ್ಮ ಸ್ಟೋರ್ ರೂಮಿನೊಳಗಿಟ್ಟ.
ಅವಳ ಬೀಜಗಳು ಕಿಟಕಿಯಿಂದಾಚೆ ಹಾರಿ ಹೋದವು. 
ಸೂರ್ಯ ಬಂದ ಆಮೇಲೆ ಮಳೆ 
ಅದರೊಳಗೊಂದು ಬೀಜ ಸಸಿಯಾಗಿ ಬೆಳೆದು
ಅದರ ಬಯಕೆಯ ತಂತು ನನ್ನನ್ನ ಹುಟ್ಟಿಸಿತು.
ಚಿನ್ನದ ಹಲ್ಲಿನ ಮಂಗಗಳ ಬಗ್ಗಲ್ಲದೇ
ಇನ್ನಾವುದರ ಬಗ್ಗೆ ಕವಿತೆ ಬರೆಯಲಾದೀತು?!
-ಸಚ್ಚಿದಾನಂದನ್ (ಮೂಲ) 
ಕನ್ನಡಕ್ಕೆ ಪ್ರಜ್ಞಾ ಶಾಸ್ತ್ರಿ 
ಅವಳ ಹುಚ್ಚು ದಿನೇ ದಿನೇ ಬೆಳೆದು, ಹಣ್ಣಾಗಿ, ಸಾವಾದಾಗ,
ನನ್ನ ಮಾವ, ಮಹಾ ಜಿಪುಣ,
ಅವಳನ್ನ ಹುಲ್ಲೊಳಗೆ ಸುತ್ತಿ
ನಮ್ಮ ಸ್ಟೋರ್ ರೂಮಿನೊಳಗಿಟ್ಟ.
ಅವಳ ಬೀಜಗಳು ಕಿಟಕಿಯಿಂದಾಚೆ ಹಾರಿ ಹೋದವು.
ಸೂರ್ಯ ಬಂದ ಆಮೇಲೆ ಮಳೆ
ಅದರೊಳಗೊಂದು ಬೀಜ ಸಸಿಯಾಗಿ ಬೆಳೆದು
ಅದರ ಬಯಕೆಯ ತಂತು ನನ್ನನ್ನ ಹುಟ್ಟಿಸಿತು.
ಚಿನ್ನದ ಹಲ್ಲಿನ ಮಂಗಗಳ ಬಗ್ಗಲ್ಲದೇ
ಇನ್ನಾವುದರ ಬಗ್ಗೆ ಕವಿತೆ ಬರೆಯಲಾದೀತು?!
 
ಒಳ್ಳೆಯ ಕವನಗಳನ್ನು ಪರಿಚಯಿಸಿದ್ದೀರಿ; ಧನ್ಯವಾದಗಳು. ಕವನಗಳ ಮೂಲಭಾಷೆಯನ್ನು ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು.
ReplyDeleteತುಂಬಾ ಧನ್ಯವಾದಗಳು ಸುನಾಥ ಸರ್. ಈ ಕವನಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಮಾಡಿದ್ದೇನೆ. ಈ ಕವಿತೆಗಳನ್ನು ಸ್ವತಃ ಕವಿ ಸಚ್ಚಿದಾನಂದನ್ ಅವರೇ ಮಲಯಾಳಂ ನಿಂದ ಇಂಗ್ಲೀಷಿಗೆ ತಂದಿದ್ದಾರೆ. ಮುಂದಿನ ಸಲ ಪೋಸ್ಟ್ ಮಾಡುವಾಗ ನಿಮ್ಮ ಸಲಹೆಯನ್ನು ನೆನಪಿಟ್ಟುಕೊಳ್ಳುತ್ತೇನೆ.
Delete