Monday, August 5, 2013

ಕಲ್ಪನೆಯೊಂದನ್ನು ಹಾಳೆಯಲ್ಲಿ ಹೂತಿಟ್ಟರೆ...



ಕಲ್ಪನೆಯೊಂದನ್ನು ಹಾಳೆಯಲ್ಲಿ ಹೂತಿಟ್ಟ ಕ್ಷಣ
ಕವಿತೆಯೊಂದು ಕಣ್ಣು ಬಿಟ್ಟು ನೋಡಿತ್ತು

ಒಂದು ರಾಶಿ ಶಬ್ಧಗಳ ಅಡಿಯಲ್ಲಿ  ಸಿಲುಕಿಕೊಂಡಿತ್ತು ಕಲ್ಪನೆ

ಬೆದರಿದಂತಿದ್ದ ಮೆಲುದನಿಯೊಂದರ
ಆ...........ವಿಯೆದ್ದು ಕಿವಿಗಳನ್ನು ಸೋಕಿತ್ತು
ಯಾಕೆ ಇಷ್ಟೊಂದು ಶಬ್ಧಗಳಲ್ಲಿ ನನ್ನನ್ನು ರೂಪಿಸುತ್ತೀಯೆ
ಕವಿತೆಯ ಸಾಲುಗಳ ತೋಳನ್ನು ಎಳೆದು ಕಟ್ಟದ್ದೀಯೆ
ಉಪಮೆಗಳ ಪರದೆಯಲ್ಲಿ ನನ್ನ ಪ್ರತಿ ಚಲನೆಯನ್ನೂ ಮಡಿಕೆ ಮಾಡಿಡುತ್ತೀಯೆ

ಇಷ್ಟೊಂದು ಇಟ್ಟಿಗೆಗಳು ಬೇಕೆ ಒಂದು ಕಲ್ಪನೆಯನ್ನು ಹೂತಿಡಲು?!




      ಗುಲ್ಜಾರ್ ಅವರ ಮತ್ತೊಂದು ಕವನ.
      ಹಿಂದಿಯಿಂದ ಕನ್ನಡಕ್ಕೆ ತಂದೆ.
      ek khyaal ko kagaj par dafnaaya to...









2 comments:

  1. ಪ್ರಜ್ಞಾ,

    ಗುಲ್ಜಾರ್ ರ ಐದೂ ಕವಿತೆಗಳನ್ನು ಬಹಳ ಸುಂದರವಾಗಿ ಕನ್ನಡಕ್ಕೆ ತಂದಿದ್ದೀರಿ.

    ಗುಲ್ಜಾರ್ ರ ಕವಿತೆಗಳಲ್ಲಿನ ಭಾವ ಮತ್ತು ಅವರು ಆ ಭಾವಕ್ಕೆ ಹೊಂದುವ ಶಬ್ದಗಳನ್ನು ಬಳಸುವ ರೀತಿ ಅದ್ಭುತ.. ಅವರೇ ಅದನ್ನು ಒಂದು ಕವಿತೆಯ ಮೂಲಕ ಹೀಗೆ ಹೇಳುತ್ತಾರೆ.

    " एक नज़्म का मिस्रा कसते हुये अल्फाज के जंगल में घुस कर मखसूस कोई मणि जब तोड़ के लाता हूँ,
    हाथों पे खराशें पड़ती हैं, और उंगलिया चिल जाती हैं,
    मगर वो लफ्ज़ जुबान पर रखते ही
    मूह में एक रस घुल जाता है। "

    "ಕವಿತೆಯ ಒಂದು ಸಾಲನ್ನು ಹೆಣೆಯುತ್ತ ಹೆಣೆಯುತ್ತ ಶಬ್ದಗಳ ಕಾನನ್ನು ಹೊಕ್ಕಿ,ಹೆಣಗಾಡಿ ಶಬ್ದದ ಮುತ್ತೊಂದನ್ನು ಹೊರತರುತ್ತೇನೆ..
    ಅಂಗೈ ತೆರೆದು ಹೋಗುತ್ತದೆ, ಬೆರಳುಗಳು ಸುಲಿದು ಹೋಗುತ್ತವೆ,
    ಆದರೆ, ಆ ಪದವನ್ನು ಉಚ್ಚರಿಸುತ್ತಲೇ, ಅದರ ರಸ ಹರಿದು ಬಾಯೆನ್ನೆಲ್ಲ ಸವಿಯಾಗಿಸುತ್ತದೆ.. "

    ನೀವು ಹೇಳಿದಂತೆ ಗುಲ್ಜಾರ್ ರ ಕವಿತೆಗಳಲ್ಲಿನ ಭಾವವನ್ನು ಬೇರೆ ಭಾಷೆಯಲ್ಲಿ ತರುವುದು ತುಂಬಾ ಕಷ್ಟ. ಆದರೂ ಈ ಎಲ್ಲ ಕವಿತೆಗಳಿಗೆ ಕನ್ನಡದಲ್ಲಿ 'poetic justice' ದೊರಕಿಸಿಕೊಡುವ ನಿಮ್ಮ ಪ್ರಯತ್ನ ಸಫಲವಾಗಿದೆ ಎಂದು ನನಗೆ ಅನ್ನಿಸುತ್ತದೆ. ನಿಮ್ಮ ಭಾವಾನುವಾದದ ನಂತರ ಕನ್ನಡದಲ್ಲಿಯೂ ಈ ಕವಿತೆಗಳು ಅಷ್ಟೇ ಪರಿಣಾಮಕಾರಿಯಾಗಿವೆ.

    ಪಲ್ಲವಿ

    ReplyDelete
    Replies
    1. ಧನ್ಯವಾದಗಳು ಪಲ್ಲವಿ. ಗುಲ್ಜಾರ್ ಕವಿತೆಗಳಲ್ಲಿನ ಭಾವವನ್ನು ಕನ್ನಡದಲ್ಲಿ ಹಿಡಿದಿಡುವ ಪ್ರಯತ್ನ ಸಫಲವಾಯಿತೇ ಇಲ್ಲವೇ ಎಂಬ ಸಂದೇಹವಿತ್ತು. ಭಾಷೆ ಬೇರೆಯದಾದರೂ ಅವರ ಕವಿತೆಗಳಲ್ಲಿನ ಭಾವ ಭಾಷೆಯಾಚೆಗಿನ ಮನಸ್ಸು-ಹೃದಯಗಳನ್ನು ತಟ್ಟಬಲ್ಲದು. ನಿಮ್ಮ ಪ್ರತಿಕ್ರಿಯೆಯಿಂದ ನನ್ನ ಉತ್ಸಾಹಕ್ಕೆ ಪುಷ್ಟಿ ದೊರೆಯಿತು. ಅಂದ ಹಾಗೆ, ನೀವು ಉದಾಹರಿಸಿ ಕವಿತೆ ಮತ್ತು ಅದರ ಅನುವಾದ ಎರಡೂ ಖುಷಿಯಾಯಿತು. -ಪ್ರಜ್ಞಾ

      Delete